ಮೂಡಲಗಿ ಸಮೀಪದ ಕಪರಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಸಿದ್ದಾರೂಢ ಮರುತಿ ನಾಗನೂರ ಇವರಿಗೆ "ಕರ್ನಾಟಕ ಶಿಕ್ಷಣ ರತ್ನ" ಪ್ರಶಸ್ತಿಯನ್ನು

Sunday, December 31, 2023 - 19:39
Updated: 3 years ago
0
ಮೂಡಲಗಿ ಸಮೀಪದ ಕಪರಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಸಿದ್ದಾರೂಢ ಮರುತಿ ನಾಗನೂರ ಇವರಿಗೆ "ಕರ್ನಾಟಕ ಶಿಕ್ಷಣ ರತ್ನ" ಪ್ರಶಸ್ತಿಯನ್ನು

ಮೂಡಲಗಿ (RNI) ಮೂಡಲಗಿ ಸಮೀಪದ ಕಪರಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಸಿದ್ದಾರೂಢ ಮರುತಿ ನಾಗನೂರ ಇವರಿಗೆ "ಕರ್ನಾಟಕ ಶಿಕ್ಷಣ ರತ್ನ" ಪ್ರಶಸ್ತಿಯನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದ ಕನ್ನಡ ನಯನ ಸಭಾಂಗಣದಲ್ಲಿ ಜರುಗಿದ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಸ್ವೀಕರಿಸಿದರು.

ಇವರು ತಮ್ಮ ವೃತ್ತಿ ಜೀವನದಲ್ಲಿ ಶಾಲೆ ಬಿಟ್ಟ  ಮಕ್ಕಳನ್ನ ಪುನಃ ಶಾಲೆಗೆ ಕರೆತಂದು, ಅವರ ಬಾಳಿಗೆ ಬೆಳಕಾಗಿದ್ದಾರೆ. ಬಡ ಮಕ್ಕಳಿಗೆ ಶಿಕ್ಷಣಕ್ಕಾಗಿ ಹಣವನ್ನು ನೀಡಿ, ತಮ್ಮೂರಿನ ಶಾಲೆಗೆ ಮಕ್ಕಳು ಕುಳಿತುಕೊಳ್ಳಲು ಡೆಸ್ಕ್,  ಚಿತ್ರಪಟಗಳು, ಮಕ್ಕಳಿಗೆ ಕ್ರೀಡೆ,  ಸಾಂಸ್ಕೃತಿಕವಾಗಿ ಶಾಲಾ ಮಕ್ಕಳಿಗಾಗಿ ತನು ಮನ ಧನ ದಿಂದ  ಮಕ್ಕಳ  ಅಭಿವೃದ್ಧಿಗಾಗಿ  ಹಗಲಿರಲು ಶ್ರಮಿಸಿದ್ದಾರೆ. ಬಡ ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸಹಾಯ ಸಹಕಾರ  ನೀಡಿರುವದು ಸ್ಮರಣಿಯವಾಗಿದೆ.

ಪ್ರಶಸ್ತಿ ವಿತರಣಾ ಸಂದರ್ಭದಲ್ಲಿ ನಾಡಿನ ಹೆಸರಾಂತ ಸ್ವಾಮೀಜಿಗಳು, ಸಾಹಿತಿಗಳು ಹಾಗೂ ವಿವಿಧ ಕ್ಷೇತ್ರದ ಬಹುಮುಖ್ಯ ಗಣ್ಯರ ಅಮೃತಹಸ್ತದಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.

Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z

What's Your Reaction?

Like Like 0
Dislike Dislike 0
Love Love 0
Funny Funny 0
Wow Wow 0
Sad Sad 0
Angry Angry 0

Comments (0)

User